ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್, ಪ್ರಥಮ ದರ್ಜೆ ಕಾಲೇಜು, ಚಿಕ್ಕಮಗಳೂರು
ವರದಿ
ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ – 24-10-2025
ದಿನಾಂಕ 24-10-2025 ರಂದು ಬೆಳಿಗ್ಗೆ 10:00 ಗಂಟೆಗೆ ಕಾಲೇಜಿನಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ “ಕ್ಯಾಂಪಸ್ ಕಟ್ಟೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು FM 103.5 MHz ಮತ್ತು MW 675 KHz ಬಾನುಲಿ ಕೇಂದ್ರದಿಂದ ನೇರವಾಗಿ ಪ್ರಸಾರವಾಯಿತು.
“ಕ್ಯಾಂಪಸ್ ಕಟ್ಟೆ” ಕಾರ್ಯಕ್ರಮವು ಒಂದು ವಿಶೇಷ ರೀತಿಯ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಆಯೋಜಕರು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಇರುವ ವಿದ್ಯಾರ್ಥಿಗಳಿಂದ ಕೆಲವು ಸಾಧಕರನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮವಾಗಿರುತ್ತದೆ.
ಅದರಂತೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೆಳಕಂಡ ಪದ್ಮಭೂಷಣ ಪುರಸ್ಕೃತ ವ್ಯಕ್ತಿಗಳನ್ನು ಈ ಕಾರ್ಯಕ್ರಮದಲ್ಲಿ ಪರಿಚಯಿಸಿದರು.
| ಕ್ರ.ಸಂ | ಪದ್ಮಭೂಷಣ ಪುರಸ್ಕೃತರು | ವಿದ್ಯಾರ್ಥಿಯ ಹೆಸರು | ತರಗತಿ |
|---|---|---|---|
| 01 | ದುವ್ವೂರು ನಾಗೇಶ್ವರ ರೆಡ್ಡಿ | ವಿಸ್ಮಯ H.V | ಪ್ರಥಮ BCA |
| 02 | ಪಮ್ಮಾಳ್ ಸಂಬಂಧ ಮುದಲಿಯಾರ್ | ಸಂಜನಾ | ಪ್ರಥಮ B.Com |
| 03 | ಅನಂತ್ ನಾಗ್ | ಅಂಕಿತ್ | ಪ್ರಥಮ BCA |
| 04 | ಎನ್. ಎಸ್. ಹರ್ಡೀಕರ್ | ಮಹಾಲಕ್ಷ್ಮಿ L.A | ತೃತೀಯ B.Com |
| 05 | ನೀಲಕಂಠ ಶಾಸ್ತ್ರಿ | ಹಾಲೇಶ್ M | ದ್ವಿತೀಯ B.Com |
| 06 | ಸಿ. ಕೆ. ನಾಯ್ಡು | ಸುಹಾಫಾತಿಮಾ | ಪ್ರಥಮ BCA |
| 07 | ಕೆ. ಎಸ್. ತಮ್ಮಯ್ಯ | ಅನನ್ಯ R | ದ್ವಿತೀಯ B.Com |
| 08 | ಕಮಲಾದೇವಿ ಚಟ್ಟೋಪಾಧ್ಯಾಯ | ಬಿಂದು | ದ್ವಿತೀಯ B.Com |
ಮುಂದುವರೆದು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉಲ್ಲಾಸ್ ಇ.ಜಿ ಅವರು, ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ರಶ್ಮಿ ಎಲ್.ಜಿ ಅವರು ಹಾಗೂ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದ ನಿರೂಪಕರಾದ ಬಸವರಾಜ್ ಗುಬ್ಬಿ ಅವರು ಉಪಸ್ಥಿತರಿದ್ದರು. ಒಂದು ಗಂಟೆಯ ನೇರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
